ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ರೋಚಕ ತಿರುವು: ಗ್ಯಾಂಗ್ ವಾರ್ ನಿಂದ ಕೊಲೆ..?
ಮಂಗಳೂರು | ಮೇ 3, 2025 | Taaza Vaani ನಿಖರ ವರದಿ
ಕೊಲೆ ಕೃತ್ಯದಲ್ಲಿ ಟ್ವಿಸ್ಟ್… ಗ್ಯಾಂಗ್ ವಾರ್ ನಿಂದ ಕೊಲೆ…? ಕೊಲೆಯಲ್ಲಿ ಎರಡು ಧರ್ಮದವರು ಭಾಗಿಯಾಗಿದ್ದಾರಾ..?
ಮಂಗಳೂರು ಬಜಪೆಯ ಕಿನ್ನಿಪದವಿಯಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ತನಿಖೆ ಮುಂದುವರೆದಿದೆ. ಈಗಾಗಲೇ ಐದಕ್ಕೂ ಹೆಚ್ಚು ಮಂದಿ ಬಂಧಿತರಾಗಿದ್ದು, ಇವರಲ್ಲಿ ಇಬ್ಬರು ಹಿಂದೂ ಸಮುದಾಯದವರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರು ಮಂಗಳೂರು ಹೊರಗಿನ ಜಿಲ್ಲೆಗಳಿಂದ ಬಂದವರಾಗಿದ್ದು, ಅಪರಾಧ ಪಟದಲ್ಲಿ ಇವರಿಗೆ ತೀವ್ರ ಹಿನ್ನೆಲೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣ ರಾಜಕೀಯ ಮೈಲಿಗೆ ತಿರುಗಿಸಲು ರಾಜಕಾರಣಿಗಳ ಪ್ರಯತ್ನ ವ್ಯರ್ಥ?
ಈ ಪ್ರಕರಣವನ್ನು ಧಾರ್ಮಿಕ ಕೋನಕ್ಕೆ ತಿರುಗಿಸಲು ಕೆಲವು ರಾಜಕೀಯ ನಾಯಕರು ಪ್ರಯತ್ನಿಸಿದರೂ, ಇದೀಗ ಇಬ್ಬರು ಹಿಂದೂರು ಕೂಡ ಭಾಗಿಯಾಗಿರುವ ವಿಚಾರ ಮುನ್ನಡೆದ ಕಾರಣ ಆ ಪ್ರಚಾರ ಹಿನ್ನಡೆ ಅನುಭವಿಸಿದೆ. ಇದರಿಂದ “ರಾಜಕೀಯ ಲಾಭ ಪಡೆಯಲು ಬಂದ ರಾಜಕಾರಣಿಗಳ ಪ್ರಯತ್ನ ವ್ಯಥವಾಯಿತೆ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
WhatsApp ಮೂಲಕ ಹರಡುತ್ತಿರುವ ಮಾಹಿತಿಗೆ ಎಚ್ಚರಿಕೆ!
ಈ ಪ್ರಕರಣ ಸಂಬಂಧಿತವಾಗಿ ಹಲವು ಅಪರಿಚಿತ ಫೋಟೋಗಳು ಹಾಗೂ ಆರೋಪಿಗಳ ಹೆಸರುಗಳು WhatsApp ಮೂಲಕ ಹರಡುತ್ತಿದ್ದರೂ, ಈವರೆಗೆ ಯಾವುದೇ ಅಧಿಕೃತ ದೃಢೀಕರಣವನ್ನು ಮಂಗಳೂರು ನಗರ ಪೊಲೀಸ್ ಇಲಾಖೆ ನೀಡಿಲ್ಲ. ಪೊಲಿಸರ ಅಧಿಕೃತ ಮಾಹಿತಿಯಿಲ್ಲದೆ ಯಾವುದೇ ಫೋಟೋಗಳನ್ನು ಪ್ರಚಾರಕ್ಕೆ ಇಡುವುದು ಕಾನೂನುಬಾಹಿರವೂ ಹೌದು. ಸಾರ್ವಜನಿಕರು ಇಂಥ ಅನಧಿಕೃತ ಮಾಹಿತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
ಮತೀಯ ಕಾರಣವೋ ಅಥವಾ ವೈಯಕ್ತಿಕ ದ್ವೇಷವೋ?
ಇದೊಂದು ಗ್ಯಾಂಗ್‌ವಾರ್ ಹಿನ್ನೆಲೆ ಹೊಂದಿರುವ ವೈಯಕ್ತಿಕ ದ್ವೇಷದ ಹತ್ಯೆ ಎಂದು ಈಗಿರುವ ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಫಾಝಿಲ್ ಹತ್ಯೆಗೆ ಪ್ರತೀಕಾರ ಎಂಬ ಹಳೆಯ ಊಹೆಗಳು ತೀವ್ರವಾಗಿ ಕುಸಿದಂತೆ ತೋರುತ್ತಿದೆ. ಆದರೆ ಇದುವರೆಗೆ ಪೊಲೀಸರು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಮಂಗಳೂರು ನಗರ ಪೊಲೀಸ್ ಆಯುಕ್ತರಿಂದ ಶೀಘ್ರದಲ್ಲಿ ಮಾಹಿತಿ ನಿರೀಕ್ಷಿಸಲಾಗುತ್ತಿದೆ.