ಇಂಡಿಯಾನಾ vs ಇಕ್ಬಾಲ್: ಈ ಘಟನೆಯ ಹಿಂದೆ ಯಾರ ಕೈ?
ಮಂಗಳೂರು: ಇತ್ತೀಚೆಗೆ ಇಂಡಿಯಾನಾ ಆಸ್ಪತ್ರೆಯಲ್ಲಿ ನಡೆದ ಹಲ್ಲೆ ಯತ್ನ ಪ್ರಕರಣವು ಇದೀಗ ತೀವ್ರ ಬಿಕ್ಕಟ್ಟಿನ ಸ್ವರೂಪವನ್ನು ಪಡೆದಿದೆ. ಕಾಸರಗೋಡು ಉಪ್ಪಳದ ಇಕ್ಬಾಲ್ ಉಪ್ಪಳ ವಿರುದ್ಧ ಹಲ್ಲೆ ಯತ್ನದ ಪ್ರಕರಣ ದಾಖಲಾಗಿದ್ದರೂ, ಇದೀಗ ಆತನ ಬೆಂಬಲಕ್ಕೆ ಜನತೆ ನಿಂತಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಿರುಕುಳದ ಆರೋಪ ಮಾಡಿರುವ ಇಕ್ಬಾಲ್, ತನ್ನ ತಂದೆಯ ಆರೋಗ್ಯ ವಿಮೆ ಕ್ಲೇಮ್ ತಿರಸ್ಕೃತವಾದಾಗ ತುರ್ತು ವೆಚ್ಚ ಪಾವತಿಸಲು ಪ್ರತಿಭಟಿಸಿದ್ದಾಗಿ ಹೇಳಲಾಗಿದೆ. ಆದರೆ ಇಕ್ಬಾಲ್‌ನ ಬೆಂಬಲಿಗರು ಈ ಘಟನೆಗೆ ಆಸ್ಪತ್ರೆಯ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಸಂದೇಶಗಳಲ್ಲಿ, ಆಸ್ಪತ್ರೆಯ ವ್ಯವಸ್ಥಾಪನೆಯ ವಿರುದ್ಧ ಕಠಿಣ ಟೀಕೆಗಳು ವ್ಯಕ್ತವಾಗುತ್ತಿದ್ದು, ಸಾರ್ವಜನಿಕರ ಒತ್ತಾಯಗಳಿಗೆ ತಾತ್ಕಾಲಿಕ ಸ್ಪಷ್ಟನೆ ನೀಡಲು ಆಸ್ಪತ್ರೆ ಮುಂದಾಗಿಲ್ಲ.
ಹೆಚ್ಚಿನ ಜನತೆ ಇಕ್ಬಾಲ್ ಅವರ ಹೋರಾಟವನ್ನು ನ್ಯಾಯಸಮ್ಮತವೆಂದು ಮನ್ನಣೆ ನೀಡುತ್ತಿದ್ದು, ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇತ್ತ, ಇಂಡಿಯಾನಾ ಆಸ್ಪತ್ರೆ ತಾವು ನ್ಯಾಯವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಪುನರುಚ್ಛರಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪೊಲೀಸ್ ತನಿಖೆಗೆ ನೀಡಿರುವುದಾಗಿ ತಿಳಿಸಿದೆ.
ಜನರ ಆಕ್ರೋಶದ ತೀವ್ರತೆ
ಇಂಟರ್ನೆಟ್ ಮತ್ತು ಸ್ಥಳೀಯ ಮಟ್ಟದಲ್ಲಿ ಆಸ್ಪತ್ರೆಯ ವಿರುದ್ಧದ ಆಕ್ರೋಶ ಹೆಚ್ಚುತ್ತಿದ್ದು, ಆರೋಗ್ಯ ಸೇವೆಗಳ ಮೇಲೆ ಸಾರ್ವಜನಿಕ ವಿಶ್ವಾಸ ಕುಸಿಯುತ್ತಿದೆ. ಈ ಪ್ರಕರಣವು ಆಸ್ಪತ್ರೆ-ರೋಗಿ ಸಂಬಂಧಕ್ಕೆ ಹೊಸ ಸವಾಲನ್ನು ಸೃಷ್ಟಿಸಿದೆ.
ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಕಾದಿರಿ ತಾಜಾ ವಾಣಿಯ ಹೆಚ್ಚಿನ ವರದಿ.