ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ದುಬಾರಿ ಆಟಗಾರನ ಪಟ್ಟ ಪಡೆದಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಈ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ, ಪಂತ್‌ನ್ನು ಬರೋಬ್ಬರಿ ₹27 ಕೋಟಿಗೆ ಖರೀದಿಸಿದೆ.
ಐಪಿಎಲ್ ಹರಾಜು ಇತಿಹಾಸದಲ್ಲಿ ದಾಖಲೆ:
ಈ ಮೊತ್ತದಿಂದ ರಿಷಬ್ ಪಂತ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರನಾಗಿ ಹೆಸರು ಮಾಡಿದ್ದಾನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ₹20.75 ಕೋಟಿಗೆ ಆರ್‌ಟಿಎಂ ಕಾರ್ಡ್ ಪ್ರಯೋಗಿಸಲು ಯತ್ನಿಸಿದರೂ, ಲಕ್ನೋ ತಂಡ ₹27 ಕೋಟಿಗೆ ಪಂತ್‌ನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿತು.
ತೆರಿಗೆ ಕತ್ತರಿಕೆ ನಂತರ ಪಂತ್‌ಗೆ ಕೈ ಸೇರೋದು ಎಷ್ಟು?
ಹರಾಜು ಪ್ರಕಾರ, ಪಂತ್‌ಗೆ ಒಟ್ಟು ₹27 ಕೋಟಿ ಮೊತ್ತ ದೊರೆತರೂ, ಭಾರತ ಸರ್ಕಾರದ ಆದಾಯ ತೆರಿಗೆ ನಿಯಮಾನುಸಾರ, ₹8.1 ಕೋಟಿ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಈ ಮೂಲಕ ಪಂತ್‌ಗೆ ಬಾಕಿ ಉಳಿಯುವ ಮೊತ್ತ ₹18.9 ಕೋಟಿಗೆ ಸರಿಯುತ್ತದೆ.
ಐಪಿಎಲ್ 2025 ಆರಂಭ:
ಈ ಐತಿಹಾಸಿಕ ಹರಾಜಿನ ನಂತರ, ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕತ್ವ ವಹಿಸುವ ನಿರೀಕ್ಷೆಯಿದೆ. 18ನೇ ಆವೃತ್ತಿಯ ಐಪಿಎಲ್ 2025 ಮಾರ್ಚ್ 14ರಿಂದ ಪ್ರಾರಂಭವಾಗಲಿದೆ.
ಆಟದ ನೆಚ್ಚಿನ ಹೀರೋ ಪಂತ್ ಬಗ್ಗೆ ಅಭಿಮಾನಿಗಳ ನಡುವೆ ಚರ್ಚೆ ಜೋರಾಗಿದೆ.
ತಾಜಾವಾಣಿ
🚨 ಈಗಲೇ ಐಪಿಎಲ್ ಅಪ್ಡೇಟ್‌ಗಳನ್ನು ಪಡೆಯಿರಿ! 🚨
ಐಪಿಎಲ್ ನ್ಯೂಸ್, ಮೆಗಾ ಹರಾಜು ವಿವರಗಳು, ತಂಡದ ಬದಲಾವಣೆಗಳು ಮತ್ತು ಇನ್ನಷ್ಟು!
💥📲 ನಮ್ಮ ವಿಶೇಷ ವಾಟ್ಸಪ್ ಗ್ರೂಪ್‌ಗೆ ಸೇರಿ!
👉 ಇಲ್ಲಿ ಕ್ಲಿಕ್ ಮಾಡಿ ಸೇರಲು!